ಜೇವರ್ಗಿ ಶಾಸಕರು ಅನುದಾನ ತರಲು ಹಣ ನೀಡಬೇಕಂತೆ
ಜೇವರ್ಗಿಯಲ್ಲಿ ವಿರೋಧ ಪಕ್ಷದವರು ಬದುಕಿದ್ದಾರಾ ?
ಜೇವರ್ಗಿ:- ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದಿಂದ ಬಜೆಟ್ ಹಣ ಬಿಡುಗಡೆ ಮಾಡಿಕೊಂಡು ಅನುದಾನ ತರಬೇಕಾದರೆ ಅವರಿಗೆ ಕಮಿಷನ್ ಹಣ ನೀಡಬೇಕು..!! ಹೌದು ಸ್ವಾಮಿ ಇಲ್ಲದಿದ್ದರೆ ಯಾವುದೇ ರೀತಿಯ ನಯಾಪೈಸೆ ಅನುದಾನ ಅವರು ಬಿಡುಗಡೆ ಮಾಡುವುದಿಲ್ಲ ಎಂದು ಜೇವರಗಿ ಶಾಸಕರಾದ ಡಾ.ಅಜೇಯ ಧರ್ಮಸಿಂಗ್ ತಮ್ಮ ಅಸಮಾಧಾನವನ್ನು, ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಮಲ್ಲಾಬಾದ್ ಏತ ನೀರಾವರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಹಾಗೂ ನೆಟ್ಟೆ ರೋಗದಿಂದ ಹಾಳಾಗಿರುವ ತೊಗರಿ ಬೆಳೆಗೆ ಪರಿಹಾರ ನೀಡುವಂತೆ ಆಗ್ರಹಿಸಿ ಧರಣಿ ನಿರತ ರೈತರ ಜೊತೆ ಮಾತುಕತೆ ನಡೆಸಿದ ಜೇವರ್ಗಿಯ ಜನಪ್ರಿಯ ಶಾಸಕರಾದ ಅಜಯ್ ಸಿಂಗ್ ತಮ್ಮ ಅಸಹಾಯಕತೆಯನ್ನು ಹೀಗೆ ತೋಡಿಕೊಂಡಿದ್ದಾರೆ.
ಈ ರೀತಿಯಾಗಿ ಸಾರ್ವಜನಿಕವಾಗಿ ಸರ್ಕಾರದ ವಿರುದ್ಧ ತಮ್ಮ ಹೇಳಿಕೆ ನೀಡುತ್ತಿರುವ ಶಾಸಕರನ್ನು ಪ್ರಶ್ನಿಸುವ ಗೋಜಿಗೆ ಹೋಗದ ಸ್ಥಳೀಯ ಪಕ್ಷದ ಪ್ರಭಾವಿ ಮುಖಂಡರು ಬಾಯಿ ಮುಚ್ಚಿ ಕುಳಿತಿದ್ದು ಏಕೆ ? ಅದರಲ್ಲಿಯೂ ಬಿಜೆಪಿ ಪಕ್ಷದ ಪ್ರಭಾವಿ ಮುಖಂಡರು ಧ್ವನಿ ಎತ್ತುತ್ತಿಲ್ಲ ಏಕೆ? ಎನ್ನುವುದು ಲಕ್ಷ ಡಾಲರ್ ಪ್ರಶ್ನೆಯಾಗಿದೆ. ವಾಸ್ತವಕ್ಕೆ ಇವರ ಅಸ್ತಿತ್ವ ಇದೆಯೋ? ಇಲ್ಲವೋ ? ಅಂತ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ .ಇಲ್ಲವೇ ಇದೊಂದು ಹೊಂದಾಣಿಕೆ ರಾಜಕೀಯ ಕುತಂತ್ರವೇನೋ ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ.
Tags
JEWARGI